ಹೆಚ್.ಎ.ಎಲ್ ಧ್ರುವ್ (ಸಂಸ್ಕೃತ: ध्रुव, "ಧ್ರುವ") ಭಾರತದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾದ ಬಹು-ಪಾತ್ರ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ದಳಕ್ಕೆ ಸರಬರಾಜು ಮಾಡಲಾಗುತ್ತಿರುವ ಈ ಯುದ್ಧಸಮಯ ವಿಮಾನದ ಪೌರ ಆವೃತ್ತಿಯೂ ಲಭ್ಯವಿದೆ. ಮೊತ್ತಮೊದಲು ಈ ವಿಮಾನವನ್ನು ನೇಪಾಳ ಹಾಗೂ ಇಸ್ರೇಲ್ ದೇಶಗಳಿಗೆ ರಫ್ತು ಮಾಡಲಾಯಿತು. ಪ್ರಸ್ತುತ ಅನೇಕ ರಾಷ್ಟಗಳಿಂದ, ಸೈನಿಕ ಹಾಗೂ ವಾಣಿಜ್ಯ ಉಪಯೋಗಗಳಿಗಾಗಿ ಈ ವಿಮಾನದ ಬೇಡಿಕೆ ಇದೆ. == ಉಲ್ಲೇಖಗಳು ==